ಶಾಂತ ಮತದಾನ ನಡೆಸಲು ಆಯೋಗ ಸರ್ವ ರೀತಿಯಲ್ಲೂ ಸಜ್ಜು: ಮುಖ್ಯ ಚುನಾವಣಾಧಿಕಾರಿ ಸಂಜಯ್ ಕುಮಾರ್

ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ...
ಎಲೆಕ್ಟ್ರಾನಿಕ್ ಮತ ಯಂತ್ರದ ಬಗ್ಗೆ ಮಾಹಿತಿ ನೀಡುತ್ತಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
ಎಲೆಕ್ಟ್ರಾನಿಕ್ ಮತ ಯಂತ್ರದ ಬಗ್ಗೆ ಮಾಹಿತಿ ನೀಡುತ್ತಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನ ನಡೆಸಿದೆ.
ಕಳೆದ ಗುರುವಾರ ದೇಶದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಕೊಲೆ, ಹಿಂಸಾಚಾರ, ಇವಿಎಂ ಧ್ವಂಸಗಳಂತಹ ಘಟನೆ ನಡೆಯಿತು. ರಾಜ್ಯದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಎದುರಿಸಲು ಸಜ್ಜಾಗಿದ್ದೀರಾ?
-ಸುಗಮ, ಶಾಂತ ಮತದಾನಕ್ಕೆ ಧಕ್ಕೆಯುಂಟುಮಾಡುವವರಿಂದ ರಕ್ಷಣೆಗೆ 96 ಸಾವಿರ ಶಸ್ತ್ರಾಸ್ತ್ರಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದೇವೆ. ಗೂಂಡಾ ಕಾಯ್ದೆ, ಸಿಆರ್ ಪಿಸಿ ಸೆಕ್ಷನ್ ನಡಿ ಕ್ರಿಮಿನಲ್ ಕೇಸು ಎದುರಿಸುತ್ತಿರುವ ಸುಮಾರು 38 ಸಾವಿರ ಜನರನ್ನು ಗುರುತಿಸಿದ್ದೇವೆ, ಮತದಾನ ನಡೆಯುವ ಸುತ್ತಮುತ್ತಲ ಪ್ರದೇಶಗಳಲ್ಲಿನ ಸೂಕ್ಷ್ಮ, ಅತಿಸೂಕ್ಷ್ಮ, ಅಹಿತಕರ ಘಟನೆ ನಡೆಯಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ.
ಐಟಿ ದಾಳಿ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ ಅಲ್ಲವೇ?
ಆದಾಯ ತೆರಿಗೆ ಇಲಾಖೆ ವೃತ್ತಿಪರವಾಗಿದ್ದು ಅವರು ಅವರ ಕೆಲಸ ವೃತ್ತಿಪರವಾಗಿ ಮಾಡುತ್ತಾರೆ.
ಕೆಲವು ನಿರ್ಲಜ್ಜ ರಾಜಕಾರಣಿಗಳು ಸೋಷಿಯಲ್ ಮೀಡಿಯಾಗಳಲ್ಲಿ ರಷ್ಯಾ ಮಾಫಿಯಾ ರೀತಿ ಮಾಫಿಯಾ ನೆರವು ಪಡೆದು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವಿದೆ, ಇದಕ್ಕೆ ಏನನ್ನುತ್ತೀರಿ?
- ಅದು ಭಾರತದಲ್ಲಿ ಸಾಧ್ಯವಿಲ್ಲ.
ಹೊಸ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಪ್ರಭಾವ ಬೀರುತ್ತಿವೆ ಎಂದು ನಿಮಗೆ ಅನಿಸುತ್ತಿದೆಯೇ? ಯುವ ಮತದಾರರು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಮತ ಚಲಾಯಿಸುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ?
ಈಗಿನ ತಲೆಮಾರಿನವರನ್ನು ಅಷ್ಟು ಸುಲಭವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ. ವಿದ್ಯಾವಂತರಾಗಿರುವ ಯುವ ಮತದಾರರು ಸಶಕ್ತರಾಗಿದ್ದು ಅವರನ್ನು ಮರುಳು ಮಾಡಲು ಸಾಧ್ಯವಿಲ್ಲ.
ಕೆಲವು ನಿರ್ಲಜ್ಜ ರಾಜಕಾರಣಿಗಳ ನಿಜ ಮುಖ ಬಯಲು ಮಾಡುವ ಅವಶ್ಯಕತೆಯಿದೆಯೇ? ಧಾರ್ಮಿಕ ಪುಸ್ತಕಗಳು ಮತ್ತು ತಮ್ಮ ಪ್ರೀತಿಪಾತ್ರ ಹಿರಿಯರ ಆಶೀರ್ವಾದದಲ್ಲಿ ಪ್ರಮಾಣವಚನ ಪಡೆಯುವ ರಾಜಕಾರಣಿಗಳು ನಂತರ ನಡೆದುಕೊಳ್ಳುವ ರೀತಿ ಬಗ್ಗೆ ಏನು ಹೇಳುತ್ತೀರಿ?

ಮತದಾನದ ದಿನಕ್ಕೆ ಬಹು ವಿಧದ ತಂತ್ರಗಳೇನು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com